ಪ್ರತಿ ವರ್ಷ ತಂಬಾಕು ಸೇವನೆಗೆ ಯುವಕರಿಂದ ಹಿಡಿದು ಎಲ್ಲ ವಯಸ್ಸಿನವರು ಸಹ ಬಲಿಯಾಗುತ್ತಿದ್ದಾರೆ. ಇತರ ರಾಷ್ಟ್ರಗಳಲ್ಲಿ ವರ್ಷದಿಂದ ವರ್ಷಕ್ಕೆ ಧೂಮಪಾನ ಹಾಗೂ ಇತರ ತಂಬಾಕು ಸೇವಿಸುವವರ ಸಂಖ್ಯೆ ಕುಸಿತ ಕಾಣುತ್ತಿದ್ದರೆ, ಭಾರತದಲ್ಲಿ ಮಾತ್ರ ಏರಿಕೆ ಕಂಡು ಬರುತ್ತಿದೆ.
ತಂಬಾಕು ಸೇವನೆ ಹಾಗೂ ತಂಬಾಕು ಉತ್ಪಾದನೆ ಎರಡೂ ಅಪಾಯಕಾರಿ. ಅಷ್ಟೇ ಅಲ್ಲದೆ, ತಂಬಾಕು ಬೆಳೆಯಿಂದಲೂ ಪರಿಸರ ನಾಶವಾಗುತ್ತಿದೆ. ಆದರೆ, ಇದರ ಸೇವನೆ ಮಾತ್ರ ಏರಿಕೆಯಾಗುತ್ತಲೆ ಇದೆ. ಯುವಕರೇ ಈ ವ್ಯಸನಕ್ಕೆ ಬಲಿಯಾಗುತ್ತಿರುವುದು ದುರಾದೃಷ್ಟಕರ.