ಏನಿದ್ರೂ ಇಂದೇ ಫೈನಲ್

ಶೆಟ್ಟರ್‌
Advertisement

ಹುಬ್ಬಳ್ಳಿ: ಧರ್ಮೆಂದ್ರ ಪ್ರಧಾನ, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಇಂದು ರಾತ್ರಿ ಭೇಟಿ ಮಾಡಿ ಚರ್ಚೆ ಮಾಡುತ್ತೇವೆ ಅಲ್ಲಿಯವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಸೂಚನೆಯ ಮೇರೆಗೆ ಅವರು ಬರುತ್ತಿದ್ದಾರೆ. ರಾತ್ರಿ 8:30ರ ಸುಮಾರಿಗೆ ಬರಲಿದ್ದಾರೆ. ಆದರೆ ನನ್ನ ರಾಜಕೀಯ ಭವಿಷ್ಯ ಇಂದೇ ತೀರ್ಮಾನ. ಇದು ಕೊನೆಯ ಗಡುವು. ಇಂದು ರಾತ್ರಿ ಎಲ್ಲವೂ ಫೈನಲ್. ಮನವೊಲಿಸುವ ಎಲ್ಲ ಪ್ರಯತ್ನಗಳು ಮುಗಿದಿವೆ. ಇನ್ನು ನನ್ನ ಭೇಟಿಗೆ ಬರೋದು ನನ್ನ ಮಾತು ಕೇಳಬೇಕಷ್ಟೆ. ನಾನು ಹೇಗೇ ಚುನಾವಣೆಗೂ ಸ್ಫರ್ಧಿಸಿದರೂ ಗೆಲ್ಲುವ ವಿಶ್ವಾಸವಿದೆ. ಜನರ ಮನಸಿನಲ್ಲಿರೋದನ್ನ ಯಾರೂ ತೆಗೆಯೋಕೆ ಆಗಲ್ಲ ಎಂದರು.
ಮುಂದಿನ ನಿರ್ಧಾರದ ಬಗ್ಗೆ ನಿರ್ಣಾಯಕ ಹಂತದಲ್ಲಿದ್ದೇನೆ. ಅದೇ ಸಮಯದಲ್ಲಿ ಬರ್ತೆನೆ ಎಂದಿದ್ದಾರೆ. ನೋಡೋಣ. ಏನ್ ಮಾತಾಡ್ತಾರೊ ಅಂತ ಕಾದು ನೋಡೋಣ ಎಂದರು.