ಮುಂಬೈ: ಎರಡು ಬಣಗಳಾಗಿ ಒಡೆದು ಹೋಗಿದ್ದ ಶಿವಸೇನೆಯ ಹೆಸರು ಮತ್ತು ಚಿಹ್ನೆಗಾಗಿ ನಡೆದಿದ್ದ ಗುದ್ದಾಟಕ್ಕೆ ಕೊನೆಗೂ ತಾರ್ಕಿಕ ಅಂತ್ಯ ದೊರೆತಿದೆ.
ಶಿವಸೇನೆಯ ಹೆಸರು ಪಕ್ಷದ ಚಿಹ್ನೆಯಾದ ಬಿಲ್ಲುಬಾಣದ ಗುರುತನ್ನು ಪಡೆಯುವಂತೆ ಏಕನಾಥ್ ಶಿಂಧೆ ಬಣಕ್ಕೆ ಅಧಿಕೃತವಾಗಿ ಚುನಾವಣಾ ಆಯೋಗ ಆದೇಶಿಸಿದೆ. ಈ ಮೂಲಕ ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆಯಾದಂತಾಗಿದೆ.