ಎಸ್ಸೆಸ್ಸೆಲ್ಸಿ ಮಾದರಿ ಉತ್ತರ ಪ್ರಕಟ

Advertisement

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾದರಿ ಉತ್ತರಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.
ಮಾರ್ಚ್ 31ರಿಂದ ಏಪ್ರಿಲ್ 15ರ ವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾದರಿ ಉತ್ತರಗಳನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳು ಪರೀಕ್ಷಿಸಿಕೊಳ್ಳಬಹುದು.ಏಪ್ರಿಲ್ 16 ರಿಂದ ಏಪ್ರಿಲ್ 18ರ ಸಂಜೆ 5.30 ರ ವರೆಗೆ ಸಲ್ಲಿಕೆಗೆ ಕಾಲಾವಕಾಶವಿದೆ. ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಮೂರು ದಿನಗಳೊಳಗೆ ಆನ್‌ನೈಲ್‌ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜಾಲತಾಣ kseab.karnataka.gov.in ನಲ್ಲಿ ಮಾದರಿ ಉತ್ತರಗಳನ್ನು ನೋಡಬಹುದು