ಎಸ್ಸಾರ್-ರಾಹುಲ್ ಗಾಂಧಿ ಮಾತುಕತೆ

Advertisement

ಬಾಗಲಕೋಟೆ: ಟಿಕೆಟ್ ವಂಚಿತ ಎಸ್.ಆರ್.ಪಾಟೀಲರಿಗೆ ಸಮಾಧಾನ ಹೇಳಿ ಅವರನ್ನು ಪಕ್ಷದ ಪ್ರಚಾರಕಾರ್ಯದಲ್ಲಿ ತೊಡಗಿಸುವ ಪ್ರಯತ್ನವನ್ನು ಪಕ್ಷದ ವರಿಷ್ಠ ರಾಹುಲ್ ಗಾಂಧಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಎಸ್.ಆರ್.ಪಾಟೀಲರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ರಾಹುಲ್, ಅತೃಪ್ತರಾಗಬೇಡಿ ಮುಂದೆ ಅವಕಾಶ ಇದೆ ಖಂಡಿತ ನಿಮ್ಮ ಹಿತಾಸಕ್ತಿ, ಸ್ಥಾನಮಾನ ಕಾಪಾಡುತ್ತೆವೆ ಎಂದು ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಕೆ.ಸಿ.ವೇಣುಗೋಪಾಲ ಸಮ್ಮುಖದಲ್ಲಿ ನಡೆದ ಈ ಚರ್ಚೆಯ ಕಾಲಕ್ಕೆ ಎಸ್.ಆರ್.ಪಾಟೀಲ ತಾವೆಂದೂ ಅಧಿಕಾರದ ಆಸೆಗಾಗಿ ಬೆನ್ನುಹತ್ತಿಲ್ಲ ಅವಕಾಶ ಸಿಕ್ಕಾಗೆಲ್ಲ ಬದ್ದತೆಯಿಂದ ಕೆಲಸ ಮಾಡಿದ್ದಾಗಿ ವಿವರಣೆ ನೀದ್ದಾರೆ ಎಂದು ತಿಳಿದು ಬಂದಿದೆ. ಬಲ್ಲ ಮೂಲಗಳ ಪ್ರಕಾರ ಎಸ್.ಆರ್.ಪಾಟೀಲ ಈ ಮಾತುಕತೆಯಿಂದ ಸಮಾಧಾನಗೊಂಡಿಲ್ಲ ಎನ್ನಲಾಗಿದೆ ಆದರೆ ಅವರ ಬೆಂಬಲಿಗರAತೂ ಇದಕ್ಕೊಂದು ತಾರ್ಕಿಕ ಅಂತ್ಯಹಾಡಲು ಆಗ್ರಹಿಸಿದ್ದಾರೆಂದು ತಿಳಿದುಬಂದಿದೆ. ಒಂದೆರಡು ದಿನದಲ್ಲಿ ಎಸ್.ಆರ್ ಪಾಟೀಲರು ಬೆಂಬಲಿಗರ,ಅಭಿಮಾನಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದಾರೆಂದು ಹೇಳಲಾಗಿದೆ.