ಬೈರದೇವನಹಳ್ಳಿ ಎಲ್ ಎಲ್ ಸಿ ಕಾಲುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಶ್ರೀ ರಾಮಲು ಅವರು .ಎರಡು ದಿನಗಳಿಂದ ಖುದ್ದು ನಾನೇ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರಿಂದ ಕಾಲುವೆಯ ದುರಸ್ತಿ ಕಾರ್ಯ ನಿಗಧಿತ ಅವಧಿಗಿಂತ ಮೊದಲೇ ಪೂರ್ಣಗೊಂಡಿದ್ದು, ಇದರಿಂದಾಗಿ ಈ ಭಾಗದ ಸಾವಿರಾರು ರೈತರ ಮೊಗದಲ್ಲಿ ಮಂದಹಾಸ ಮೂಡಿರುವುದು ವೈಯಕ್ತಿಕವಾಗಿ ನನಗೂ ತುಂಬಾ ಖುಷಿ ತಂದಿದೆ. ಕಳೆದ 20 ದಿನಗಳಿಂದ ನೀರು ಹರಿಯದ ಪರಿಣಾಮ ಈ ಭಾಗದ ರೈತರು ಬೆಳೆದಿದ್ದ ಬೆಳೆಗಳು ಒಣಗಿ ಹೋಗುವ ಆತಂಕ ಎದುರಾಗಿತ್ತು. ಅಧಿಕಾರಿಗಳ ಇಚ್ಛಾಶಕ್ತಿ, ಕಾರ್ಮಿಕರ ಸತತ ಪರಿಶ್ರಮದಿಂದ ಕಾಲುವೆಯ ದುರಸ್ತಿ ಕಾರ್ಯವನ್ನು ಮುಗಿಸಿಕೊಟ್ಡಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುವೆ. ಎಂದು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ತಿಳಿಸಿದ್ದಾರೆ.