ಕುಷ್ಟಗಿ: ನಾನು ಮುಖ್ಯಮಂತ್ರಿಯಾದ 14 ತಿಂಗಳಲ್ಲಿ25 ಸಾವಿರ ಕೋಟಿ ಯಲ್ಲಿ 26 ಲಕ್ಷ ರೈತ ಕುಟುಂಬದ ಸಾಲ ಮನ್ನಾ ಮಾಡಿದ್ದೇನೆ. ಈ ವಿಚಾರದಲ್ಲಿ ನನಗೆ ಕಾಂಗ್ರೆಸ್‌ನವರು ತೊಂದರೆ ಕೊಟ್ಟಿದ್ದರು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಎಚ್ ಡಿ ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಆಗಮಿಸಿದ ಬಳಿಕ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು ಇದಾದ ಬಳಿಕ ಜನರಲ್ ಉದ್ದೇಶಿಸಿ ಮಾತನಾಡಿ, ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.ಪಂಚರತ್ನ ಯೋಜನೆಯಿಂದ ಕರ್ನಾಟಕ ರಾಜ್ಯದ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಜನತೆಯ ಆರ್ಥಿಕ ಸದೃಢತೆಗೆ ಶಿಕ್ಷಣ, ವಸತಿ, ಆರೋಗ್ಯ, ರೈತ ಚೈತನ್ಯ ಮತ್ತು ಯುವ ನವಮಾರ್ಗ-ಮಹಿಳಾ ಸಬಲೀಕರಣ ಅಗತ್ಯ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸ್ತ್ರೀಶಕ್ತಿ ಸಂಘದ ಸಾಲದಿಂದ ಋುಣಮುಕ್ತ ಮಾಡುತ್ತೇನೆ ಎಂದು ತಿಳಿಸಿದರು.
ಗುಣಮಟ್ಟದ ಶಿಕ್ಷಣವೇ ಆಧುನಿಕ ಶಕ್ತಿ, ಬಡವರಿಗೆ ವಸತಿಯ ಆಸರೆ, ಪ್ರತಿ ಗ್ರಾಪಂಗೆ ಹೈಟೆಕ್ ಆಸ್ಪತ್ರೆ, ಆಧುನಿಕ ತಂತ್ರಜ್ಞಾನದ ಕೃಷಿ ಚೈತನ್ಯ, ಯುವ ಜನತೆಗೆ ನವಮಾರ್ಗ ಮತ್ತು ಮಹಿಳೆಯರಿಗೆ ಉದ್ಯೋಗಕ್ಕಾಗಿ ಜೆಡಿಎಸ್ ಪಕ್ಷವು ಪಂಚರತ್ನ ಯೋಜನೆ ರೂಪಿಸಿದೆ. ರಾಜ್ಯ ಸರಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ, ಕಾರ್ಯಕ್ರಮದ ಹೆಸರಿನಲ್ಲಿ ಜನರ ಹಣ ಲೂಟಿ ಆಗುತ್ತಿದೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡವರ ಕಲ್ಯಾಣವೇ ನನ್ನ ಗುರಿ ಎಂದರು.
ನೆರೆದಿದ್ದರು. ಕಲಾ ತಂಡಗಳ ನೃತ್ಯ ಪ್ರದರ್ಶನ, ವಾದ್ಯಮೇಳಗಳು ವಿಶೇಷವಾಗಿತ್ತು. ಬೃಹತ್ ಹಾರ ಹಾಕಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಗೌರವಿಸಲಾಯಿತು. ನಂತರ ತಾವರಗೇರಿ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು