ಎಲ್ಲದಕ್ಕೂ ರಾಜಕಾರಣ ತಂದು ರೈತರಿಗೆ ಅಪಮಾನ ಮಾಡುತ್ತಾರೆ

CM
Advertisement

ಹಾವೇರಿ: ಬಿಜೆಪಿ ದುಷ್ಟ ನೀತಿಯಿಂದ ಹಾಲು ಉತ್ಪಾದನೆ ಕಡಿಮೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ, ಎಲ್ಲದಕ್ಕೂ ರಾಜಕಾರಣ ತಂದು ರೈತರಿಗೆ ಅಪಮಾನ ಮಾಡುತ್ತಾರೆ. ನೀವು ನೋಡುವ ದೃಷ್ಟಿ ದುಷ್ಟವಾಗಿದೆ, ನಮ್ಮ ನೀತಿಯಲ್ಲ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಪರೋಪಕ್ಷಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ಜಂಗಮನಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವ‌ ಯುಹಚ್ ಟಿ ಹಾಲು ಸಂಸ್ಕರಣ ಘಟಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.


ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ಒಕ್ಕೂಟಗಳು ತುಂಬಾ ಕ್ಷೀಣ ಪರಿಸ್ಥಿತಿ ಇತ್ತು.ದಕ್ಷಿಣ ಕರ್ನಾಟಕ ಒಕ್ಕೂಟಗಳು ಗ್ರ್ಯಾಂಟ್ ನಲ್ಲಿ ಸ್ಥಾಪನೆ ಆಯಿತು.ಅಲ್ಲಿ ಗ್ರ್ಯಾಂಟ್ ನಲ್ಲಿ ಈ ಭಾಗದಲ್ಲಿ ಸಾಲದಲ್ಲಿ ಸ್ಥಾಪನೆಯಾಯಿತು. 2010-11 ರಲ್ಲಿ ಈ ಭಾಗದ ಒಕ್ಕೂಟದ ಅಧ್ಯಕ್ಷರು ನನ್ನ ಬೇಟಿಯಾಗಿದ್ದರು. ಆಗ ಉತ್ತರ ಕರ್ನಾಟಕದ ಒಕ್ಕೂಟಗಳ ಸಾಲಮನ್ನಾ ಮಾಡಿದೆ. ಈಗ ಒಕ್ಕೂಟಗಳು ಚೇತರಿಕೆ ಆಗಿವೆ. ನಮ್ಮ ನೀತಿ ಬಗ್ಗೆ ಹೇಳುತ್ತಾರೆ, ಅವರ ನೀತಿ ಏನಾಗಿತ್ತು.ಎಲ್ಲಾ ಒಕ್ಕೂಟಗಳು ದೀವಾಳಿ ಆಗಿತ್ತು. ಆರು ತಿಂಗಳಾದರು ರೈತರಿಗೆ ಪೇಮೆಂಟ್ ಆಗ್ತಿರಲಿಲ್ಲ. ಇವತ್ತು 15 ದಿನಗಳಲ್ಲಿ ಪೇಮೆಂಟ್ ಆಗುತ್ತಿದೆ ಎಂದು ಹೇಳಿದರು.
2013 ರಿಂದ ಹಾವೇರಿ ಹಾಲು ಒಕ್ಕೂಟಕ್ಕಾಗಿ ಹೋರಾಟ ಮಾಡಿದ್ದೇವೆ. ಯುಎಚ್ ಟಿ ಪ್ಲ್ಯಾಂಟ್ ಇವತ್ತು ಲೋಕಾರ್ಪಣೆಗೊಂಡಿದೆ. ಆರು ತಿಂಗಳು ಹಾಲು ಕೆಡದಂತೆ ಸಂರಕ್ಷಣೆ ಮಾಡುವ ಯುನಿಟ್ ಇದು. ರಾಜ್ಯದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಯುನಿಟ್ ಇದು. ಹಾವೇರಿಯಲ್ಲಿ ಕ್ಷೀರಕ್ರಾಂತಿ ಮಾಡಬೇಕು ಎಂದು ಆದೇಶ ನೀಡುತ್ತೇನೆ.ಧಾರವಾಡ ಹಾಲು ಒಕ್ಕೂಟಕ್ಕು ಅನುದಾನ ನೀಡುತ್ತೇನೆ. ಹಾಲು ಉತ್ಪಾದನೆ ಬಗ್ಗೆ ಬಹಳಷ್ಟು ಚರ್ಚೆ ಆಗುತ್ತಿದೆ. ಚರ್ಮಗಂಟು ರೋಗದಿಂದಾಗಿ ಹಾಲು ಉತ್ಪಾದನೆ ಯಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಿದರು. ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಮಾಡಲು ತೀರ್ಮಾನ ಮಾಡಿದ್ದೇವೆ. ನನ್ನ ಹುಟ್ಟುಹಬ್ಬದಲ್ಲಿ 11 ಗೋವುಗಳನ್ನ ತಂದು ನಿಲ್ಲಿಸಿದ್ದರು. ಆಗ ರಾಜ್ಯಕ್ಕೆ ಗೋವುಗಳನ್ನ ದತ್ತು ತೆಗೆದುಕೊಳ್ಳುವ ವ್ಯವಸ್ಥೆ ಮಾಡಿದೆ. ಇನ್ನೊಂದು ವಾರದಲ್ಲಿ ಗೋಶಾಲೆಗಳಿಗೆ 30 ಕೋಟಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.