ಹುಬ್ಬಳ್ಳಿ: ಎಚ್.ಡಿ.ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿ. ಅವರ ಗ್ರಹಬಲದ ಅನುಸಾರ 2024 ರಲ್ಲಿ ಪ್ರಧಾನಿಯಾಗಿ ದೆಹಲಿಗೆ ಹೋದರಷ್ಟೇ ಕರ್ನಟಕದಲ್ಲಿ ಮುಸ್ಲಿಂ ಮುಖ್ಯಮಂತ್ರಿಯ ಮಾತು…! ಇದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಶನಿವಾರ ಇಲ್ಲಿ ಸ್ಪಷ್ಟವಾಗಿ ಹೇಳಿದ ಮಾತು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, `ಎಚ್.ಡಿ.ಕುಮಾರಸ್ವಾಮಿಯವರ ಗ್ರಹಗತಿಯಲ್ಲಿ ರಾಷ್ಟ್ರ ನಾಯಕರಾಗುವ ಯೋಗವಿದೆ. ಹೀಗಾಗಿ ದೆಹಲಿಗೆ ಹೋಗೋತನಕ ಇಲ್ಲಿ ಎಚ್ಡಿಕೆಯವರೇ ಸಿಎಂ. ಉಪಮುಖ್ಯಮಂತ್ರಿಗಳ ಸ್ಥಾನ ಸೃಷ್ಟಿಯಾದಲ್ಲಿ ಮುಸ್ಲಿಂ- ದಲಿತ ಇತ್ಯಾದಿ ಎಲ್ಲ ವರ್ಗದವರಿಗೂ ಅವಕಾಶ ದೊರೆಯಲಿದೆ’ ಎಂದು ನುಡಿದರು.