ಉಳ್ಳಾಲ: ಥ್ರೆಡ್ ಹೌಸ್ ಮಳಿಗೆ ಒಳಗಡೆಯೇ ಮಾಲಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತೊಕ್ಕೊಟ್ಟು ಜಂಕ್ಷನ್ನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ತೊಕ್ಕೊಟ್ಟಿನ ನ್ಯೂ ಥ್ರೆಡ್ ಹೌಸ್ನ ಮಾಲಿಕ ಕಣೀರು ತೋಟ ,ಮಹಾಲಕ್ಷ್ಮಿ ಲೇ ಔಟ್ ನಿವಾಸಿ
ಪ್ರವೀಣ್ ಆಳ್ವ( 44) ಆತ್ಮ ಹತ್ಯೆಗೈದ ದುರ್ದೈವಿ. ಸೋಮವಾರ ಬೆಳಗ್ಗಿನ ಜಾವ ಸುಮಾರು 6 ಗಂಟೆಯ ಹೊತ್ತಿಗೆ ಅಂಗಡಿಗೆ ಬಂದ ಪ್ರವೀಣ್ ಎದುರಿನ ಶಟರ್ ಕೆಳಗೆಳೆದು ಶಾಲಿನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾರೆ. ಪ್ರವೀಣ್ ಅವರ ಸ್ನೇಹಿತರೋರ್ವರು ಬಂದು ಶಟರ್ ಎತ್ತಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಪ್ರವೀಣ್ ಅವರು ಬರೆದಿರುವ ಡೆತ್ ನೋಟೊಂದು ಸಿಕ್ಕಿದ್ದು ಅದರಲ್ಲಿ ನನ್ನ ಸಾಲಕ್ಕೆ ನಾನೇ ಕಾರಣ,ಅಮ್ಮ,ಪತ್ನಿ ,ಮಗನಲ್ಲಿ ಸಾರಿ ಅಂತ ಉಲ್ಲೇಖಿಸಿದ್ದಾರೆ. ಮೃತರು ತಾಯಿ ,ಪತ್ನಿ,ಓರ್ವ ಪುತ್ರನ ಅಗಲಿದ್ದಾರೆ.