ಬೆಳಗಾವಿ: ಗಡಿ ತಿಕ್ಕಾಟ ತೀವ್ರಗೊಂಡಿದೆ. ಉರಿಯೋ ಬೆಂಕಿಗೆ ತುಪ್ಪ ಸುರಿಯಲು ಮಹಾರಾಷ್ಟ್ರದ ಶಿವಸೇನೆ ಮುಂದಾಗಿದ್ದು, ಉದ್ಧವ ಠಾಕ್ರೆ ಬಣ ಇಂದು ಸಂಜೆ 5 ಗಂಟೆಗೆ ಬೆಳಗಾವಿಯ ಕೊಗನಳ್ಳಿ ಚೆಕ್‌ಪೋಸ್ಟ್‌ಗೆ ಬರುವುದಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದೆ.
ಮಹಾರಾಷ್ಟ್ರ ಸಚಿವರ ಬೆಳಗಾವಿ ಪ್ರವಾಸ ರದ್ದು ಮಾಡಿದ್ದರಿಂದ ಕ್ಯಾತೆ ತೆಗೆದಿರುವ ಉದ್ಧವ್ ಠಾಕ್ರೆ ಬಣದ ಮುಖಂಡ ಹಾಗೂ ಕೊಲ್ಲಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ, ಕರ್ನಾಟಕ ಗಡಿ ಪ್ರವೇಶಕ್ಕೆ ಮುಂದಾಗಿದ್ದಾರೆ. ಇವರ ಈ ಹೇಳಿಕೆಯು ಗಡಿ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ನತೆಗೆ ದಾರಿ ಮಾಡಿಕೊಟ್ಟಿದೆ.