ಹುಬ್ಬಳ್ಳಿ: ಸಚಿವ ಉಮೇಶ್ ಕತ್ತಿ ಬಗ್ಗೆ ಮಾತನಾಡಿದ ಅವರು, ನಮ್ಮ ಜೊತೆಗೆ ಆತ್ಮೀಯವಾದ ಸಂಬಂಧ ಇತ್ತು. ಉಮೇಶ್ ಕತ್ತಿ ಅವರದ್ದು ನೇರವಾಗಿ ಮಾತನಾಡುವಂತ ವ್ಯಕ್ತಿತ್ವ. ಮನಸ್ಸಿಗೆ ಬಂದಂತೆ, ಸ್ಪಷ್ಟವಾಗಿ ಹೇಳುವಂತ ವ್ಯಕ್ತಿ. ಉತ್ತರ ಕರ್ನಾಟಕ ಮತ್ತು ಬೆಳಗಾವಿ ಅಭಿವೃದ್ಧಿ ಬಗ್ಗೆ ಕನಸುಗಳನ್ನು ಕಂಡವರು ಅವರು. ಅವರ ಅಗಲಿಕೆ ರಾಜ್ಯಕ್ಕೆ ಬಹಳಷ್ಟು ನಷ್ಟವಾಗಿದೆ. ಅವರು ಸಾವು ನಮಗೆ ನೋವು ತಂದಿದೆ ಎಂದಿದ್ದಾರೆ.
ಇನ್ನು ನೀರಾವರಿ ವಿಚಾರವಾಗಿ ಬಹಳಷ್ಟು ನಿಷ್ಠುರವಾಗಿ ಮಾತನಾಡುತ್ತಿದ್ದರು. ಸದಾ ಪಕ್ಷದ ಬಗ್ಗೆ ಯೋಚನೆ ಮಾಡುತ್ತಿದ್ದರು. ಸಕ್ಕರೆ ಕಾರ್ಖಾನೆ ತೆಗೆದು ಸಾಕಷ್ಟು ಜನರಿಗೆ ಉದ್ಯೋಗ ನೀಡಿದ ಮಹಾನ ವ್ಯಕ್ತಿ ಅವರು. ಅವರ ಆತ್ಮಕ್ಕೆ ಭಗವಂತ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.