ಉಮಾಶ್ರೀಗೆ ಟಿಕೆಟ್ ನೀಡದಿದ್ದಲ್ಲಿ ಸಾಮೂಹಿಕ ರಾಜೀನಾಮೆ

ನೇಕಾರ
Advertisement

ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀಯವರಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಸಿ ಫಾರ್ಮ್ ನೀಡಿ ಅವರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡಿದರೆ ಮಾತ್ರ ಗೆಲುವು ನಿಶ್ಚಿತವೆಂದು ಮುಖಂಡ ನೀಲಕಂಠ ಮುತ್ತೂರ ತಿಳಿಸಿದರು.
ಸೋಮವಾರ ಇಲ್ಲಿನ ಭದ್ರನವರ ಬಿಲ್ಡಿಂಗ್ ಹತ್ತಿರ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯ ಮೇಲೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಕ್ಷೇತ್ರದ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿತ್ತು. ಆದರೂ ಕೇವಲ ಆರು ತಿಂಗಳ ಹಿಂದೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ, ಇದರಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲು ಅನುಭವಿಸಲಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ವರಿಷ್ಠರು ತಾವು ನೀಡಿದ ಬಿ ಫಾರ್ಮ್ ಮರಳಿ ಪಡೆದುಕೊಂಡು ಉಮಾಶ್ರೀಯವರಿಗೆ ಟಿಕೆಟ್ ನೀಡಿದ್ದೇಯಾದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವೆಂದು ಮುತ್ತೂರ ತಿಳಿಸಿದರು.
ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ರಾಜು ಭದ್ರನವರ, ಮಲ್ಲಪ್ಪ ಭಾವಿಕಟ್ಟಿ, ಕಿರಣ ಕರಲಟ್ಟಿ, ರಾಹುಲ ಕಲಾಲ, ಬಸವರಾಜ ಗುಡೋಡಗಿ, ಉಸ್ಮಾನಸಾಬ್ ಲೆಂಗ್ರೆ, ಸತ್ಯಪ್ಪ ಮಗದುಮ್, ಶ್ರೀಶೈಲ ಮೇಣಿ, ಚಿದಾನಂದ ಗಾಳಿ, ಗುರುಲಿಂಗ ಚಿಂಚಲಿ, ಮಾರುತಿ ಸೋರಗಾವಿ ಸೇರಿದಂತೆ ರಬಕವಿ ಬನಹಟ್ಟಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.