ಉಪ್ಪಿ ಹುಟ್ಟುಹಬ್ಬಕ್ಕೆ ‘ಯುಐ’ ಚಿತ್ರದ ವಿಶೇಷ ವಿಡಿಯೋ ಬಿಡುಗಡೆ

Advertisement

ಉಪ್ಪಿ 2 ಚಿತ್ರ ನಿರ್ದೇಶನ ಮಾಡಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದ ಉಪೇಂದ್ರ 7 ವರ್ಷಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ. ಈ ಬಾರಿ ಕೂಡ ತಮ್ಮ ಚಿತ್ರಕ್ಕೆ ವಿಭಿನ್ನವಾದ ಟೈಟಲ್ ಇಡುವುದರ ಮೂಲಕ ಉಪೇಂದ್ರ ಸದ್ದು ಮಾಡಿದ್ದರು. ‘ಯು ಐ’ ಎಂಬ ಶೀರ್ಷಿಕೆಯನ್ನು ತಮ್ಮ ಮುಂದಿನ ನಿರ್ದೇಶನದ ಸಿನಿಮಾಗೆ ಇಟ್ಟಿರುವ ಉಪೇಂದ್ರ ನಾಳೆ ( ಸೆಪ್ಟೆಂಬರ್‌ 18 ) 54ನೇ ವಸಂತಕ್ಕೆ ಕಾಲಿಡಲಿದ್ದಾರೆ.

ಹೀಗೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಯುಐ ಚಿತ್ರತಂಡ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಶುಭಾಶಯ ಕೋರಲು ತೀರ್ಮಾನಿಸಿದೆ. ಈ ಕುರಿತಾಗಿ ಚಿತ್ರತಂಡ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ವಿಶ್ವ ಸಿನಿಮಾದ ಸ್ವಯಂ ಚಿಂತಕನ ಹುಟ್ಟುಹಬ್ಬವನ್ನು ಆಚರಿಸಲು ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದೆ.