ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ಈಗ ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಾರ್ಟಿ ಎಂಬ ಹೆಸರನ್ನು, ದೀವಟಿಗೆ(ಪಂಜು) ಚಿಹ್ನೆಯನ್ನು ಚುನಾವಣಾ ಆಯೋಗ ಮಾನ್ಯ ಮಾಡಿದೆ. ಇದೇ ವೇಳೆ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ʼಬಾಳಾಸಾಹೇಬಾಂಚಿ ಶಿವಸೇನಾʼ ಎಂಬ ಹೆಸರನ್ನು ಮಂಜೂರು ಮಾಡಿದರೂ ಯಾವುದೇ ಚಿಹ್ನೆ ನೀಡಿಲ್ಲ. ಎರಡೂ ಬಣಗಳು ತ್ರಿಶೂಲ ಚಿಹ್ನೆ ಕೋರಿವೆ. ಆದರೆ, ಅದು ಆಯೋಗದ ಚಿಹ್ನೆಗಳ ಪಟ್ಟಿಯಲ್ಲಿ ಇಲ್ಲದಿರುವುದರಿಂದ ನಾಳೆಯೊಳಗೆ ಬೇರೊಂದು ಚಿಹ್ನೆಯನ್ನು ಪ್ರಸ್ತಾವಿಸುವಂತೆ ಸೂಚಿಸಲಾಗಿದೆ.