ಉಣಕಲ್ ರಾಮಲಿಂಗೇಶ್ವರ ದೇವಸ್ಥಾನ ಜಾಗೆ ಬಿಆರ್ ಟಿಎಸ್ ಸುಪರ್ದಿಗೆ

Advertisement

ಹುಬ್ಬಳ್ಳಿ : ಇಲ್ಲಿನ ಉಣಕಲ್ ಕ್ರಾಸ್ ನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ ಇರುವ ಸಿಟಿಎಸ್ ನಂಬರ್ 3448 ಜಾಗೆಯನ್ನು ಬಿಆರ್ ಟಿಎಸ್ ಕಂಪನಿ ಗುರುವಾರ ಬೆಳಿಗ್ಗೆ ತನ್ನ ಸುಪರ್ದಿಗೆ ಪಡೆಯಿತು.
ಈ ಜಾಗ ಬಿಆರ್ ಟಿಎಸ್ ಕಂಪನಿ ಒಡೆತನಕ್ಕೆ ಸೇರಿದೆ. ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ ಎಂದು ಸೂಚನಾ ಫಲಕವನ್ನು ದೇವಸ್ಥಾನದ ಮುಂಬಾಗಿಲಿಗೆ ಅಂಟಿಸಲಾಗಿದೆ.
ಬೆಳ್ಳಂ ಬೆಳಿಗ್ಗೆ ದೇವಸ್ಥಾನದಲ್ಲಿ ಯಾರೂ ಇರಲಿಲ್ಲ. ಈ ವೇಳೆ ಸುಮಾ 8 ಗಂಟೆ ಹೊತ್ತಿಗೆ ಸಹಾಯಕ ಆಯುಕ್ತ ಝುಬೇರ್ ಅಹ್ಮದ್ ಹಾಗೂ ಬಿಆರ್ ಟಿಎಸ್ ಅಧಿಕಾರಿಗಳು ರಾಮಲಿಂಗೇಶ್ವರ ದೇವಸ್ಥಾನದ ಬಾಗಿಲು ಮುಚ್ಚಿ ಅದಕ್ಕೆ ನೋಟಿಸ್ ಅಂಟಿಸಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದರು.
ಈ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್ ಮೀಸಲು ಪಡೆಯ ಒಂದು ವ್ಯಾನ್ ನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.