ಕೇವಲ ಮುಸ್ಲಿಮರ ಮತ ಲೆಕ್ಕದಲ್ಲಿ ಇಟ್ಕೊಂಡು ಉಗ್ರಗಾಮಿ ಚಟುವಟಿಕೆ ಖಂಡಸಿದಿದ್ದರೆ ಕಾಂಗ್ರೆಸ್ ಕೂಡ ಸರ್ವನಾಶವಾಗುತ್ತದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಲ್ಲಿ ಉಗ್ರಗಾಮಿಗಳು ಸಿಕ್ಕಿದ್ದಾರೆ ಅವರೆಲ್ಲರೂ ಮುಸ್ಲಿಮರೇ. ಆದರೆ, ಎಲ್ಲ ಮುಸ್ಲಿಮರು ಉಗ್ರಗಾಮಿಗಳು ಅಲ್ಲ. ದೇಶಭಕ್ತ ಮುಸ್ಲಿಮರು ಬಹಳಷ್ಟು ಜನರು ಇದ್ದಾರೆ. ಉಗ್ರಗಾಮಿ ಮುಸ್ಲಿಮರನ್ನು ಮಟ್ಟ ಹಾಕಲು ನಾವೆಲ್ಲರೂ ಒಂದಾಗಬೇಕು ಎಂದರು. ಎಸ್ಡಿಪಿಐ ಹಾಗೂ ಪಿಎಫ್ಐ ನಿಷೇಧ ಮಾಡುವ ಅಗತ್ಯತೆ ಕುರಿತು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಕೇಂದ್ರದ ನಾಯಕರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.