ಹುಬ್ಬಳ್ಳಿ: ಪೇ ಸಿಎಂ ಆಯ್ತು. ಈಗ ಪೇ ಮೇಯರ್! ಹುಬ್ಬಳ್ಳಿ-ಧಾರವಾಡ ಮಹಾನಗರ ಮೇಯರ್ ವಿರುದ್ಧ ಕಾಂಗ್ರೆಸ್ ಬುಧವಾರ ಪೇ ಮೇಯರ್ ಹೆಸರಿನ ಅಭಿಯಾನ ಆರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಫೋಟೊ ಹಾಕಿ ಬೆಂಗಳೂರಿನಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ ಮಾದರಿಯಲ್ಲೇ, ಮೇಯರ್ ಈರೇಶ ಅಂಚಟಗೇರಿ ಭಾವಚಿತ್ರವನ್ನು ಅಳವಡಿಸಿದ ಪೇ ಮೇಯರ್' ಪೋಸ್ಟರ್‌ಗಳನ್ನು ಅವಳಿನಗರದಲ್ಲಿ ಅಳವಡಿಸಿದೆ. ರಾಜ್ಯ ಸರ್ಕಾರದ ನಂತರ, ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇರುವ ಪ್ರಮುಖ ಮಹಾನಗರವೊಂದರ ಪ್ರಥಮ ಪ್ರಜೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಅಭಿಯಾನ ಇದಾಗಿರುವುದರಿಂದ ಸಾರ್ವಜನಿಕರ ಗಮನ ಸೆಳೆದಿದೆ. ಕ್ಯೂಆರ್ ಕೋಡ್‌ನಲ್ಲಿ ಮೇಯರ್ ಫೋಟೊ ಇರುವಂತೆ ವಿನ್ಯಾಸ ಮಾಡಿ
ಪೇ ಮೇಯರ್… 40 ಪರ್ಸೆಂಟ್ ಅಕ್ಸೆಪ್ಟೆಡ್ ಹಿಯರ್’ ಎಂದು ಬರೆಯಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್ ಅಂಚಟಗೇರಿ, ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸ್ ಆಯುಕ್ತ ಲಾಭೂರಾಮ್ ಅವರಿಗೆ ಪತ್ರ ಬರೆದಿದ್ದಾರೆ.