ಇಬ್ಬರು ಪಿಡಿಒಗಳು ಲೋಕಾಯುಕ್ತ ಬಲೆಗೆ

PDO
Advertisement

ಬಾಗಲಕೋಟೆ: ಲಂಚ ಸ್ವೀಕರಿಸುವ ವೇಳೆ ಇಬ್ಬರು ಪಿಡಿಒಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೇವಿನಮಟ್ಟಿ ಪಿಡಿಒ ಚಂದ್ರಕಾಂತ್ ತಿಮ್ಮಾಪುರ, ರಾಂಪುರ ಪಿಡಿಒ ಮುದಕಪ್ಪ ಎಂಬುವವರು ಎನ್‌ಎ ಪ್ಲಾಟ್ ಎಂಟ್ರಿ ಮಾಡಲು ಎರಡೂವರೆ ಲಕ್ಷ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೊನ್ನಾಕಟ್ಟಿಯ ವಾಸು ಜಾಧವ್ ಅವರಿಂದ 1 ಲಕ್ಷ ರೂ.ಗಳ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ, ಸಿಪಿಐ ಮಲ್ಲಪ್ಪ ಬಿದರಿ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದೆ.