ʻದುನಿಯಾʼ ಅಲ್ಬಂ ಡಿ. 16 ರಂದು ಲೋಕಾರ್ಪಣೆಯಾಗಲಿದ್ದು, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಅಲ್ಬಂನ ಪ್ರೋಮೋ ಬಿಡುಗಡೆಗೊಳಿಸಿ ಶುಭ ಕೋರಿದರು.
ಕವಿರತ್ನ ವಿ. ನಾಗೇಂದ್ರ ಪ್ರಸಾದ ಸಾಹಿತ್ಯದ, ಶ್ರೀ ವಿಜಯಪ್ರಕಾಶ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ʻದುನಿಯಾ’ ಸುಮಧುರ ಹಾಡುಗಳ ಗುಚ್ಛವಾಗಿದೆ. ಸಲೀಂ ಸುಲೇಮಾನ್ ಅವರು ಹಾಡಿಗೆ ಸಂಗೀತ ನೀಡಿದ್ದಾರೆ.
ಈ ವೇಳೆ ಸಚಿವರಾದ ಮುರಗೇಶ್ ನಿರಾಣಿ, ಡಾ. ಸುಧಾಕರ್, ನಾಗೇಂದ್ರ ಪ್ರಸಾದ್, ವಿಜಯ್ ಪ್ರಕಾಶ, ಸುಲೇಮಾನ್ ಅವರು ಉಪಸ್ಥಿತರಿದ್ದರು.
ಇದೇ 16 ರಂದು ಯೂಟ್ಯೂಬ್‌ನಲ್ಲಿ ಹಾಡು ರಿಲೀಸ್ ಆಗಲಿದೆ.