‘ಇದು ನನ್ನ ಕೊನೆಯ ಚುನಾವಣೆ’

ರಮಾನಾಥ ರೈ
Advertisement

ಮಂಗಳೂರು: ಕರ್ನಾಟಕ ವಿಧಾನಸಭೆಗೆ 2023ರಲ್ಲಿ ನಡೆಯುವ ಚುನಾವಣೆಗೆ ನನ್ನ ಕೊನೆಯ ಸ್ಪರ್ಧೆ. ಜನತೆ ಆಶೀರ್ವಾದ ಮಾಡಿದರೆ ಮುಂದಿನ ಅವಧಿಯಲ್ಲಿ ಅದ್ಭುತವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ. ನಾನು ಹಿಂದೆ ಏನು ಹೇಳಿದ್ದೇನೆ ಅದನ್ನು ಮಾಡಿದ್ದೇನೆ, ಆಗ ಮಾಡಿದನ್ನು ಈಗಲು ಹೇಳುತ್ತೇನೆ ಇದು ನನ್ನ ಜಾಯಮಾನವಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದರು.
ಬುಧವಾರ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಪ್ರಚಾರದಿಂದಾಗಿ ಕಳೆದ ಚುನಾವಣೆಯಲ್ಲಿ ನನಗೆ ಸೋಲಾಗಿರುವುದು ನಿಜ, ಆದರೆ ಜನರಿಗೆ ಈಗ ಮನವರಿಕೆಯಾಗಿದ್ದು, ಜನರು ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.
ನನ್ನ ರಾಜಕೀಯ ಜೀವನದ ಕೊನೆಯ ಚುನಾವಣಾ ಸ್ಪರ್ಧೆ ಇದಾಗಿದೆ ಎಂದ ಅವರು ಒಬ್ಬ ಪ್ರಾಮಾಣಿಕ ರಾಜಕಾರಣಿಗೆ ರಾಜಕೀಯ ಮಾಡುವುದು ಸುಲಭದ ಮಾತಲ್ಲ, ಭೂಮಿ ಮಾರಿ ರಾಜಕೀಯ ಮಾಡಲು ನನ್ನಿಂದ ಸಾಧ್ಯವಿಲ್ಲ, ನಾನು ಎಂದು ಕೂಡ ಸುಳ್ಳು ಹೇಳುವುದಿಲ್ಲ ಎಂದರು.