ಇಂದೋರ್: ಇಂದು ನನಗೆ ಸಾವಿರಾರು ಮಾತೆಯರ ಆಶೀರ್ವಾದ ಸಿಕ್ಕಿದೆ, ನನಗಿದು ಅತ್ಯಂತ ಅರ್ಥಪೂರ್ಣ ಹುಟ್ಟುಹಬ್ಬ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ಧಾರೆ.
ಮಧ್ಯಪ್ರದೇಶದ ಶಿಯೋಪುರ್ ನಲ್ಲಿ ಆಯೋಜಿಸಿದ್ದ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿ ಅವರು ಸ್ವಸಹಾಯ ಸಂಘಗಳ ಸಾಧನೆಯ ಮಾಹಿತಿ ಪಡೆದರು. ಮೋದಿ ಅವರು ಫಲಾನುಭವಿಗಳ ಮಾತು ಕೇಳಿ ಭಾವುಕರಾದರು.
ಈ ವೇಳೆ ಮಾತನಾಡಿದ ಮೋದಿ ಅವರು ನಾನು ಇಂದು ನನ್ನ ತಾಯಿಯನ್ನು ಭೇಟಿ ಮಾಡುತ್ತಿದ್ದೆ, ತಾಯಿಯ ಚರಣಗಳಿಗೆ ನಮಿಸಿ ಆಶೀರ್ವಾದ ಪಡೆಯುತ್ತಿದ್ದೆ. ಆದರೆ ಇಂದು ನನಗೆ ಸಾವಿರಾರು ಮಾತೆಯರ ಆಶೀರ್ವಾದ ಸಿಕ್ಕಿದೆ. ಇಂದು ನಾನು ಗ್ರಾಮೀಣ ಪ್ರದೇಶದ ಬುಡಕಟ್ಟು ಜನರ ಜತೆ ಕಾಲ ಕಳೆಯುತ್ತಿದ್ದೇನೆ. ನನಗಿದು ಅತ್ಯಂತ ಅರ್ಥಪೂರ್ಣ ಹುಟ್ಟುಹಬ್ಬ ಎಂದು ತಿಳಿಸಿದ್ಧಾರೆ.