ಇಂದು ಮರೆಯಲಾಗದ ಶುಭದಿನ: ಬಿಎಸ್‌ವೈ

Advertisement

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ತಮ್ಮ 80ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಪ್ರಯುಕ್ತ ಅವರು ಶಿವಮೊಗ್ಗದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.


ನನ್ನ ಹುಟ್ಟುಹಬ್ಬದ ವೇಳೆ ಸ್ವತಃ ಮೋದಿ ಆಗಮಿಸುತ್ತಿರುವುದು ವಿಶೇಷ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಮತ್ತೊಮ್ಮೆ ರಾಜ್ಯದ ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಮನವಿ ಮಾಡಿದರು.
ಇಂದು ಮರೆಯಲಾಗದ ಶುಭದಿನ. ಈ ಭಾಗದ ಜನರ ಕನಸು ಬಹಳ ವರ್ಷಗಳ ನಂತರ ನನಸಾಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸ್ವತಃ ಪ್ರಧಾನಿಯವರೇ ಬಂದು ಉದ್ಘಾಟನೆ ಮಾಡುತ್ತಿರುವುದು ಸಂತಸದ ಸಂಗತಿ, ಎಲ್ಲರೂ ವಿಮಾನ ನಿಲ್ದಾಣವನ್ನು ಸಂಚಾರ ಮತ್ತು ಇತರ ಜೀವನೋಪಾಯಕ್ಕೆ ಉಪಯೋಗ ಮಾಡಿಕೊಂಡರೆ ಇನ್ನೂ ಒಳ್ಳೆಯದಾಗುತ್ತದೆ, ವಿಮಾನ ನಿಲ್ದಾಣದಿಂದ ಉದ್ಯೋಗಾವಕಾಶಗಳು, ಪ್ರವಾಸೋದ್ಯಮಕ್ಕೆ ಶಕ್ತಿ ಬರುತ್ತದೆ ಎಂದರು.