ಇಂದಿನಿಂದ ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ: ಶೆಟ್ಟರ

Advertisement

ಹುಬ್ಬಳ್ಳಿ: ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಇಂದಿನಿಂದ ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದರು.
ನಾನು ಆರು ಬಾರಿ ಆಯ್ಕೆಯಾದ ವ್ಯಕ್ತಿ. ಏಳನೇ ಬಾರಿ ಶಾಸಕನಾಗಲು ಪಕ್ಷದ ವರಿಷ್ಠರು ಅವಕಾಶ ನೀಡಲಿಲ್ಲ. ಅತ್ಯಂತ ಕೆಟ್ಟದಾಗಿ ನಡೆಸಿಕೊಂಡರು. ಕೊನೆ ಪಕ್ಣ ಆರು ತಿಂಗಳ ಶಾಸಕನಾಗಿ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಎಂದರು.

ಜಗದೀಶ ಶೆಟ್ಟರಗೆ ಟಿಕೆಟ್ ಕೊಟ್ಟರೆ ಮತ್ತೆ ದೊಡ್ಡಮಟ್ಟದ ನಾಯಕನಾಗಿ ಬೆಳೆದು ನಿಲ್ಲಬಹುದು ಎಂಬ ದುರುದ್ದೇಶದ ಹಿನ್ನೆಲೆಯಲ್ಲಿ ಬಹುಶಃ ಹೀಗೆ ಮಾಡಿದರೊ ಏನೊ. ಬಹಳ ಕೆಟ್ಟದಾಗಿ ನಡೆಸಿಕೊಂಡರು ಎಂದು ಭಾವನೆ ವ್ತಕ್ತಪಡಿಸಿದರು.
ಬಿಜೆಪಿಯಲ್ಲಿ ಲಿಂಗಾಯತ ನಾಯಕರಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ ನಾನೇ ಹಿರಿಯ. ಇದು ಎಲ್ಲೊ ಒಂದು ಕಡೆ ಕೆಲವರಿಗೆ ಸಹಿಸಿಕೊಳ್ಳಲಾಗಲಿಲ್ಲ ಎನಿಸುತ್ತದೆ.ಅದಕ್ಕಾಗಿ ಷಡ್ಯಂತ್ರದಿಂದ ತಮ್ಮ ಹಿತಾಸಕ್ತಿಗಾಗಿ ಪಕ್ಷದ ಬೆಳವಣಿಗೆಗೆ ಕುಂದು ತರುವ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.

ನಾನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಟೀಕೆ ಮಾಡುವುದಿಲ್ಲ. ಅವರ ಮೇಲೆ ಅಪಾರ ಗೌರವ ಇದೆ. ರಾಜ್ಯ ಬಿಜೆಪಿ ಬೆಳವಣಿಗೆಗಳು ಅವರಿಗೆ ಗೊತ್ತಿಲ್ಲ ಎಂದು ಹೇಳಿದರು.

ಯಾವಾಗ ನನ್ನ ಮನವಿಗ ಸ್ಪಂದಿಸಲಿಲ್ಲವೊ ನನ್ನನ್ನು ಪಕ್ಷದಿಂದ ಹೊರ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಭಾವಿಸಿ ಪಕ್ಷ ತೊರೆಯುವ ನಿರ್ಧಾರ ಮಾಡಿದೆ.ಅಭಿಮಾನಿಗಳು, ಬೆಂಬಲಿಗರು, ಲಿಂಗಾಯತ ಸಮುದಾಯದ ರಾಜ್ಯವ್ಯಾಪಿ ಮುಖಂಡರು ದೂರವಾಣಿ ಕರೆ ಮಾಡಿ ಆತ್ಮಸ್ಥೈರ್ಯ ತುಂಬಿದರು ಎಂದು ಹೇಳಿದರು.
ಬಿಜೆಪಿ ಎಲ್ಲವೂ ಕೊಟ್ಟಿದೆ : ಬಿಜೆಪಿ ನನಗೆ ಎಲ್ಲವೂ ಕೊಟ್ಟಿದೆ. ಅಷ್ಟೇ ಪ್ರಾಮಾಣಿಕವಾಗಿ ಪಕ್ಷದ ಏಳ್ಗೆಗೆ, ಸಂಘಟನೆಗೆ ಕೆಲಸ ಮಾಡಿದ್ದೇನೆ. ಒಂದೇ ಒಂದು ಕಪ್ಪು ಚುಕ್ಕೆ ನನ್ನ ರಾಜಕೀಯ ಜೀವನದಲ್ಲಿ ಇಲ್ಲ. ಹೀಗೆ ಶ್ರಮಪಟ್ಟು ಕಟ್ಟಿದ ಪಕ್ಷದಲ್ಲಿ ಆ ಪಕ್ಷದ ತತ್ಚ ಸಿದ್ಧಾಂತಕ್ಕೆ ವಿರುದ್ಶವಾದ ತೀರ್ಮಾನಗಳು ಆಗುತ್ತಿವೆ ಎಂದು ಆರೋಪಿಸಿದರು.