ಹುಬ್ಬಳ್ಳಿ: ಮಾಜಿ ಸಚಿವ ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ ಇದರ ಹಿಂದೆ ಬಿಜೆಪಿ ಪಾತ್ರವಿಲ್ಲ. ಬಿಜೆಪಿ ಪ್ರೇರಿತ ದಾಳಿ ಅನ್ನೋದು ಸುಳ್ಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಆದರ್ಶನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನಿಖಾ ಸಂಸ್ಥೆಗಳಿಗೆ ಎಷ್ಟು ಮುಕ್ತ ವಾತಾವರಣ ನೀಡಿದ್ದೇವೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಯಾರೇ ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಶಂಕರ್ ಪ್ರಕರಣದಲ್ಲಿಯೂ ತನಿಖಾ ಸಂಸ್ಥೆಗಳು ತಮ್ಮದೇ ಆದ ಕ್ರಮ ಕೈಗೊಳ್ಳಲಿವೆ ಎಂದರು.
ಸಿಟಿ ರವಿ ವರ್ಸಸ್ ವಿಜಯೇಂದ್ರ ಮಾತಿನ ಚಕಮಕಿ ವಿಚಾರವಾಗಿ ಪ್ರಶ್ನೆ ಕೇಳಿದ ಮಾಧ್ಯಮದವರ ವಿರುದ್ಧ ಸಿಎಂ ಸಿಡಿಮಿಡಿಗೊಂಡರಲ್ಲದೆ, ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು.
ಸಚಿವ ವಿ. ಸೋಮಣ್ಣ ದೆಹಲಿಗೆ ಹೋಗುತ್ತಿರುವ ವಿಚಾರ ನನಗೆ ಗೊತ್ತಿದೆ. ನಾನು ಅವರ ಜೊತೆ ಮಾತಾಡಿದ್ದೇನೆ ಎಂದರು.