ಆತ್ಮಹತ್ಯೆಗೆ ಯತ್ನ, ವಯೋವೃದ್ಧೆ ರಕ್ಷಿಸಿದ ಯುವಕ

ಆತ್ಮಹತ್ಯೆ
Advertisement

ಬೆಳಗಾವಿ: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವಯೋವೃದ್ಧೆಯನ್ನು ಯುವಕನೊಬ್ಬ ಕಾಪಾಡಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಪಾರಿಶ್ವಾಡ ಗ್ರಾಮದ ಮಲಪ್ರಭಾ ನದಿಯಲ್ಲಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಸಾಪುರ ಗ್ರಾಮದ ಬಾಳಮ್ಮ ನಾವಲಗಿ ಎಂಬ ವೃದ್ಧೆಯನ್ನು ಆ ಗ್ರಾಮದ ಐನಾಜ ನಾಜಿಲ ಮಾರಿಹಾಳ ಎಂಬ ಯುವಕ ರಕ್ಷಿಸಿದ್ದಾನೆ.
ಮಹಿಳೆಯ ಈ ಕೃತ್ಯಕ್ಕೆ ಕಾರಣವೇನು ಎಂಬುದು ಮಾತ್ರ ಇನ್ನೂ ತಿಳಿದಿಲ್ಲ. ಮಲಪ್ರಭಾ ನದಿಯಲ್ಲಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಬಚಾವ ಮಾಡಿದ ಐನಾಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಇನ್ನು ಜೀವದ ಹಂಗು ತೊರೆದು ಮಹಿಳೆಯನ್ನು ರಕ್ಷಿಸಿದ ಯುವಕನ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.