ಆತಂಕ ಸೃಷ್ಟಿಸಿದ್ದ ಚಿರತೆ ಬೋನಿಗೆ

Advertisement

ಕೋಲಾರ: ಸಾಕು ಪ್ರಾಣಿಗಳನ್ನು ತಿಂದು ಆತಂಕ ಸೃಷ್ಟಿಸಿದ್ದ ಚಿರತೆ ಬೋನಿಗೆ ಬಿದ್ದಿದೆ. ಮುಳಬಾಗಿಲು ತಾಲೂಕು ಕೆಂಪಾಪುರದಲ್ಲಿ‌ ಈ ಘಟನೆ ನಡೆದಿದೆ.
ಕೆಂಪಾಪುರ ಗ್ರಾಮದ ವೇಣುಗೋಪಾಲ್ ಸ್ವಾಮಿ ದೇವಸ್ಥಾನದ ಬಳಿ ಇಟ್ಟಿದ್ದ ಬೋನ್‌ ಚಿರತೆ ಬಿದ್ದಿದೆ. ಈ ಚಿರತೆ ಕಳೆದ ಮೂರು ದಿನದ ಹಿಂದೆ ಕುರಿಯೊಂದನ್ನು ತಿಂದು ಮುಗಿಸಿತ್ತು. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ವತಿಯಿಂದ ಬೋನು ಇಡಲಾಗಿತ್ತು. ಸ್ಥಳಕ್ಕೆ ಮುಳಬಾಗಿಲು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.