ಚಿಕ್ಕಮಗಳೂರು: ರಾಜಕಾರಣದಲ್ಲಿ ಯಾರನ್ನೇ ಆದ್ರು ನಾವು ಎದುರಿಸಲೇ ಬೇಕು, ಹೋರಾಡಲೇಬೇಕು.
ಇದು ರಾಜಕಾರಣ, ಯಾರು ಬೇಕಾದರೂ ನಿಲ್ಲಬಹುದು ಎಂದು ತಮ್ಮ ಎದುರು ಆರ್.ಅಶೋಕ್ ಸ್ಪರ್ಧೆ ಸಂಬಂದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
ಶೃಂಗೇರಿ ಶಾರದ ದೇವಿ ದರ್ಶನ ಪಡೆದು ಸುದ್ದಿಗಾರರ ಜೊತೆ ಮಾತನಾಡಿ, ಆರ್.ಅಶೋಕ್ ನನ್ನ ವಿರುದ್ದ ಸ್ಪರ್ಧೆ ಮಾಡುವುದಾದರೇ ಅವರಿಗೆ ಸ್ವಾಗತ ಹೇಳಿ, ಹೋರಾಡುತ್ತೇನೆ ಎಂದರು.
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಗೆ ಆಶೀರ್ವಾದ ಪೀಠ ಇದು, ಹಸ್ತ ಕೊಟ್ಟಂತಾ ಪೀಠ ಇದಾಗಿದ್ದು, ಶಾರದಾಂಭೆ ದರ್ಶನಕ್ಕಷ್ಟೆ ಬಂದಿದ್ದೇನೆ ರಾಜಕಾರಣ ಇಲ್ಲ ಎಂದರು. ಮೂರನೇ ಪಟ್ಟಿ ಚರ್ಚೆ ಆಗುತ್ತಿದೆ, ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.