ಹುಬ್ಬಳ್ಳಿ: ಹೊಸ ವರ್ಷಾಚರಣೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಜಿಲ್ಲೆಯ ಮಹಾನಗರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ರಾತ್ರಿ 9 ಗಂಟೆಯಿಂದ ವಿಶೇಷ ತಂಡಗಳು ಜಿಲ್ಲೆಯಾದ್ಯಂತ ಗಸ್ತು ನಡೆಸಲಿವೆ ಎಂದು ಹುಬ್ಬಳ್ಳಿ -ಧಾರವಾಡ ಕಮಿಷನರ್ ಲಾಬೂರಾಮ್ ಹೇಳಿದರು
ಕಾನೂನು ಸುವ್ಯವಸ್ಥೆ ಕಾಪಾಡಲು 7 ಕೆಎಸ್ಆರ್ಪಿ ಮತ್ತು 10 ಸಿಆರ್ಪಿ ತುಕಡಿಗಳ ನೇಮಕ ಮಾಡಲಾಗಿದೆ. ಅವಳಿ ನಗರದಾದ್ಯಂತ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಬೈಕ್ ವ್ಹೀಲಿಂಗ್, ಡ್ರಿಂಕ್ ಆ್ಯಂಡ್ ಡ್ರೈವ್ ತಡೆಯುವ ನಿಟ್ಟಿನಲ್ಲಿ ಪ್ರಮುಖ ವೃತ್ತಗಳಲ್ಲಿ ವಿಶೇಷ ತಂಡಗಳ ನೇಮಕ ಮಾಡಲಾಗಿದೆ. ಯಾರೇ ಕಾನೂನು ಉಲ್ಲಂಘನೆ ಮಾಡಿದ್ರೂ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.ಪಂಚತಾರಾ ಹೋಟೆಲ್, ಬಾರ್, ರೆಸ್ಟೋರೆಂಟ್, ಪಾರ್ಟಿ ಹಾಲ್ಗಳಲ್ಲಿ 1 ಗಂಟೆಯ ತನಕ ಮಾತ್ರ ಹೊಸ ವರ್ಷದ ಆಚರಣೆಗೆ ಅವಕಾಶ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡದಂತೆ ಈಗಾಗಲೇ ಆಯೋಜಕರ ಸಭೆ ನಡೆಸಲಾಗಿದೆ. ಅವಳಿ ನಗರ ಸೂಕ್ಷ್ಮ ಪ್ರದೇಶವಾದ್ದರಿಂದ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ತಿಳಿಸಿದರು.