ಅರ್ಥಪೂರ್ಣ, ವೈಭವಪೂರ್ಣ ದಸರಾ ಆಚರಣೆ: ಸಿಎಂ

ದಸರಾ
Advertisement

ಮೈಸೂರು: ಈ ಬಾರಿ ಅರ್ಥಪೂರ್ಣ ಹಾಗೂ ವೈಭವಪೂರ್ಣ ದಸರಾ ಆಚರಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಮುಂಡೇಶ್ವರಿ ಪೂಜೆ, ದಸರಾ ಉದ್ಘಾಟನೆ ನಡೆಯಲಿದೆ. ದಸರಾ ಹಬ್ಬಕ್ಕೆ ತನ್ನದೇ ಆದ ಪರಂಪರೆ ಇದೆ. ದಸರಾ ನಾಡಹಬ್ಬವೂ ಹೌದು ಜನ ಸುಗ್ಗಿ ಮುಗಿಸಿ ಸಂಭ್ರಮಿಸುವ ಹಬ್ಬವೂ ಹೌದು ಎಂದರು. ದಸರಾ ಹಬ್ಬದ ಎಲ್ಲಾ ಸಿದ್ಧತೆಗಳನ್ನು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಹಗಲಿರುಳು ಮಾಡಿದ್ದಾರೆ. ಕರ್ನಾಟಕ ಜನತೆಗೆ ನಾಡಹಬ್ಬ ದಸರಾ ಶುಭಾಶಯಗಳು. ಮೈಸೂರು ಜನತೆಗೆ ವಿಶೇಷ ಶುಭಾಶಯಗಳನ್ನು ಮುಖ್ಯಮಂತ್ರಿಗಳು ತಿಳಿಸಿದರು.