ಅರುಣ್ ಸಿಂಗ್‌ ಅವರಿಗೆ ತಾಕೀತು ಮಾಡಿ: ಸ್ವಾಮೀಜಿ

ಬಸವ ಜಯಮೃತ್ಯುಂಜಯ ಸ್ವಾಮೀಜಿ
Advertisement

ಬಸನಗೌಡ ಪಾಟೀಲ್ ಯತ್ನಾಳ್ ಕೇವಲ ಶಾಸಕರು, ನಾಯಕರಲ್ಲ ಎಂಬ ಅರುಣ್ ಸಿಂಗ್ ಹೇಳಿಕೆ ಇಡೀ ಪಂಚಮಸಾಲಿ ಸಮುದಾಯಕ್ಕೆ ನಿರಾಶೆ ಉಂಟುಮಾಡಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ದುಡಿಯುತ್ತಿರುವ ಪಂಚಮಸಾಲಿ ಸಮುದಾಯದ ಬಿಜೆಪಿ ಕಾರ್ಯಕರ್ತರು, ನಾಯಕರ ಬಗ್ಗೆ ಅಗೌರವದಿಂದ ಅವಹೇಳನಕರವಾಗಿ ಮಾತನಾಡಬಾರದು. ಈ ಕುರಿತು ನಳಿನ್‌ ಕುಮಾರ್ ಕಟೀಲ್‌ ಅವರು ಅರುಣ್ ಸಿಂಗ್‌ ಅವರಿಗೆ ತಾಕೀತು ಮಾಡಬೇಕೆಂದರು.
ಯತ್ನಾಳ್‌ರಿಗೆ ಮಂತ್ರಿ ಸ್ಥಾನ ಬೇಡ ಮೀಸಲಾತಿ ಬೇಕು ಅನ್ನೋ ಕಮಿಟ್‌ಮೆಂಟ್ ಇದೆ. ಆ ಕಮಿಟ್‌ಮೆಂಟ್ ಎಲ್ಲರಿಗೂ ಬರೋಕೆ ಸಾಧ್ಯವಿಲ್ಲ. ಆದರೆ, ಅರುಣ್‌ ಸಿಂಗ್‌ ಅವರಿಗೆ ಕರ್ನಾಟಕದ ಬಗ್ಗೆ ಗೊತ್ತಿಲ್ಲ. ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದರು.