ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಿ; ಲಾಲು ಪುತ್ರಿ ಭಾವನಾತ್ಮಕ ಟ್ವೀಟ್‌

Advertisement


ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌ ಶನಿವಾರ ಭಾರತಕ್ಕೆ ಮರಳುತ್ತಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಲಾಲು ಪುತ್ರಿ ರೋಹಿಣಿ ಆಚಾರ್ಯ ಭಾರತಕ್ಕೆ ಬರುತ್ತಿರುವ ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರಿಗೆ ಸಿಂಗಾರಪುರದಲ್ಲಿ ಎರಡು ತಿಂಗಳ ಹಿಂದೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆದಿತ್ತು. ಅವರ ಪುತ್ರಿ ರೋಹಿಣಿ ಆಚಾರ್ಯ ಒಂದು ಕಿಡ್ನಿಯನ್ನು ನೀಡಿದ್ದರು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಅವರ ಟ್ವೀಟ್‌ನಲ್ಲಿ “ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಲಾಲು ಪ್ರಸಾದ್‌ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ‘ನಮ್ಮ ಗೌರವಾನ್ವಿತ ನಾಯಕ ಲಾಲು ಜೀ ಅವರ ಆರೋಗ್ಯದ ಬಗ್ಗೆ ನಾನು ಮಹತ್ವದ ಘೋಷಣೆ ಮಾಡುತ್ತಿದ್ದೇನೆ. ನಮ್ಮ ತಂದೆ ಫೆಬ್ರವರಿ 11ರಂದು ಸಿಂಗಾಪುರದಿಂದ ಭಾರತಕ್ಕೆ ಮರಳುತ್ತಿದ್ದಾರೆ. ಅವರು ಗುಣುಮುಖವಾದ ಬಳಿಕ ಅವರನ್ನು ಕಳುಹಿಸುತ್ತಿದ್ದೇನೆ. ದಯವಿಟ್ಟು ನನ್ನ ತಂದೆಯನ್ನು ನೋಡಿಕೊಳ್ಳಿ‘ ಎಂದು ಭಾವನಾತ್ಮಕ ಸಾಲುಗಳು ಬರೆದು ಅವರ ಜೊತೆ ಇರುವ ಫೋಟೋವನ್ನೂ ರೋಹಿಣಿ ಹಂಚಿಕೊಂಡಿದ್ದಾರೆ.