ಅಪಪ್ರಚಾರ ಮಾಡಿದರೆ ಇನ್ನು ಸುಮ್ಮನಿರಲ್ಲ

ನಿರಾಣಿ
Advertisement

ಬಾಗಲಕೋಟೆ: ನನ್ನ ವಿರುದ್ಧ ಅಪಪ್ರಚಾರ ಮಾಡಿ, ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯಾರಾದರೂ ಮುಂದಾದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಚಿವ ಮುರುಗೇಶ ನಿರಾಣಿ ಎಚ್ಚರಿಕೆ ನೀಡಿದ್ದಾರೆ.
ಕಲಾದಗಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಲ್ಲಪ್ಪ ಹೆಗಡೆ ಎಂಬಾತ ಕ್ಷೇತ್ರದಲ್ಲಿ ಬಂದು ನನ್ನ ವಿರುದ್ಧ ಮಾತಾಡ್ತಾನೆ, ಕಾಂಗ್ರೆಸ್‌ನವರು ಸಮಾವೇಶ ನಡೆಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸ್ಪರ್ಧಿಸಲು ನಿಮಗೆ ಅವಕಾಶವಿದೆ. ಆದರೆ, ಅನಗತ್ಯ ನನ್ನ ಹೆಸರು ಎಳೆದು ತಂದು ಸುಳ್ಳು ಆರೋಪ ಮಾಡಿದರೆ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ ಎಂದರು.
ರೈತರ ಮೇಲೆ ನಯಾಪೈಸೆ ಸಾಲದ ಹೊರೆ ಹಾಕದೆ 21 ಕಾರ್ಖಾನೆ ಕೊಟ್ಟಿದ್ದೇನೆ. ನಾನು ಕೊಟ್ಟಷ್ಟು ಬೀಳಗಿಯಲ್ಲಿ ಮತ್ತ್ಯಾರಾದರೂ ಕಬ್ಬಿನ ಬಿಲ್ ನೀಡಿದನ್ನು ತೋರಿಸಿ ಅಥವಾ ನೀವೇ ನಾನು ಕೊಟ್ಟಷ್ಟು ಕೊಟ್ಟು ಆಮೇಲೆ ಮಾತನಾಡಿ ಎಂದು ಬಹಿರಂಗ ಸವಾಲು ಹಾಕಿದರು.