ಬಾಗಲಕೋಟೆ(ಇಳಕಲ್): ಸೋಲಾಪೂರ ಮಂಗಳೂರು ರಾಷ್ಟ್ರೀಯ ಹೆದ್ದಾರಿ ೫೦ ರ ಇಳಕಲ್ ಬಳಿ ರವಿವಾರ ರಾತ್ರಿ ನಡೆದ ಬೊಲೆರೋ ವಾಹನ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ಮೂಲತಃ ಕೊಪ್ಪಳ ಜಿಲ್ಲೆಯ ತಾವರಗೇರಿ ಪಟ್ಟಣದವರಾದ ಕಿಡದೂರನಾಯಕ ಕುಟುಂಬದ ೧೮ ಜನರು ವಿಜಯಪುರದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿ ಮರಳಿ ವಾಪಸ್ಸಾಗುವ ಸಮಯದಲ್ಲಿ ಚಾಲಕ ಹೆದ್ದಾರಿಯಲ್ಲಿನ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೇ ಇನ್ನೋರ್ವರು ಆಸ್ಪತ್ರೆಯಲ್ಲಿ ಬೆಳಗಿನ ಜಾವ ಮೃತಪಟ್ಟರು.
ಸ್ಥಳದಲ್ಲೇ ಶಾಮಿದಸಾಬ ಕಿಡದೂರನಾಯಕ (೬೫ ),ಮೌಲಾಸಾಬ ಕಿಡದೂರನಾಯಕ (೬೦) ಸ್ಥಳದಲ್ಲಿಯೇ ಮೃತಪಟ್ಟಿದ್ರೆ ಆಸ್ಪತ್ರೆಯಲ್ಲಿ ಇಮಾಮಬಿ ಕಿಡದೂರನಾಯಕ (೬೦) ಮೃತಪಟ್ಟರು. ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದ ಸಣ್ಣಪುಟ್ಟ ಗಾಯಗೊಂಡವರನ್ನು ನಗರದ ಆಸ್ಪತ್ರೆಗೆ ಸೇರಿಸಲಾಗಿದೆ.