ಅಧಿಕಾರಿಗಳು ಜನರ ಸೇವಕರಾಗಿ ಕೆಲಸ ಮಾಡಬೇಕು

ಸಿದ್ದರಾಮಯ್ಯ
Advertisement

ಕುಳಗೇರಿ ಕ್ರಾಸ್(ಬಾಗಲಕೋಟೆ): ಜನರು ತಾಪಂ-ಜಿಪಂ ಕಚೇರಿಗಳಿಗೆ ಅಲೆಯುವುದನ್ನ ತಪ್ಪಿಸುವ ಸಲುವಾಗಿ ಅಧಿಕಾರ ವಿಕೇಂದ್ರಿಕರಣ ಮಾಡಿ. ಸುಮಾರು ಆರು ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಗಳನ್ನ ನಿರ್ಮಾಣ ಮಾಡಿ ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದು ನಮ್ಮ ಸರ್ಕಾರ ಎಂದು ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.
ಅವರು ಗ್ರಾಮದಲ್ಲಿ ಭಾರತ ನಿರ್ಮಾನ ರಾಜೀವಗಾಂಧಿ ಸೇವಾ ಕೇದ್ರದಿಂದ ೩೫ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಗ್ರಾಪಂ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು.
ಗ್ರಾಪಂ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿರುವ ಅಧ್ಯಕ್ಷ-ಉಪಾಧ್ಯಕ್ಷ-ಸದಸ್ಯರು ಜನರ ಕಷ್ಟ-ಸುಖಗಳಿಗೆ ಸ್ಪಂದಿಸಬೇಕು. ಹಾಗೆ ಅಧಿಕಾರಿಗಳು ಜನರ ಸೇವಕರಾಗಿ ಕೆಲಸ ಮಾಡಬೇಕೆ ಹೊರತು ಅಧಿಕಾರಿಗಳಾಗಿ ಅಲ್ಲ. ಗ್ರಾಪಂ ಅಭಿವೃದ್ಧಿ ಮಾಡಲು ಪಿಡಿಒ ಎಂಬ ಅಧಿಕಾರಿಯನ್ನ ನೆಮಿಸಲಾಗಿದೆ. ಅಭಿವೃದ್ಧಿ ಅಧಿಕಾರಿ ಎಂದು ನೇಮಿಸಿದ್ದೇ ಜನರ ಸೇವೆಗಾಗಿ. ಸದ್ಯ ಕೆಲವು ಪಿಡಿಒ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ಸಿದ್ಧರಾಮಯ್ಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ಹೊರ ಹಾಕಿದರು.
ನಮ್ಮ ಕ್ಷೇತ್ರಕ್ಕೆ ಮತ್ತೊಮ್ಮೆ ನೀವೆ ನಿಲ್ಲಿ: ಸಿದ್ಧರಾಮಯ್ಯನವರನ್ನ ಬೆನ್ನುಬಿಡದ ಕಾರ್ಯಕರ್ತರು ಅಭಿಮಾನಿಗಳು ಹೇಳುತ್ತಿರುವುದು ಒಂದೇ ಮಾತು ನೀವು ಮತ್ತೊಮ್ಮೆ ಬಾದಾಮಿಯಿಂದಲೇ ಸ್ಪರ್ಧೆ ಮಾಡ್ಬೇಕು ನಿಮ್ಮ ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ ಎಂಬ ಕೂಗು ಕೇಳ ತೊಡಗಿತು… ಇನ್ನೊಮ್ಮೆ ನಮ್ಮ ಕ್ಷೇತ್ರಕ್ಕೆ ನೀವು ನಿಲ್ಲಬೇಕ್ರೀ..ಸಾಹೇಬ್ರ.. ಎಂದು ಗ್ರಾಪಂ ಸದಸ್ಯೆಯೊಬ್ಬರು ಅಭಿಮಾನದಿಂದ ಹೇಳಿದ್ದನ್ನ ಬೆಂಬಲಿಸಿದ ಅಭಿಮಾನಿಗಳು ಸಿಳ್ಳೇ..ಕೇ..ಕೇ.. ಚಪ್ಪಾಳೆಯಿಂದ ಅಭಿನಂದಿಸಿದರು. ಮತ್ತೆ ಬಾದಾಮಿಯಿಂದಲೇ ಸ್ಪರ್ದೆಮಾಡಿ ಸಿಎಂ ಆಗ್ಬೇಕು ಸರ್ ಎಂದು ಒತ್ತಾಯಿಸಿದರು. ನೀವು ನಿಂತು ಆಯ್ಕೆಯಾದರೇ ಮಾತ್ರ ನಮ್ಮ ಕ್ಷೇತ್ರ ಅಭಿವೃದ್ಧಿ ಹೊಂದುವುದು ಎಂದು ಕ್ಷೇತ್ರಕ್ಕೆ ಸಿದ್ದು ಮಾಡಿದ ಅಭಿವೃದ್ಧಿ ಮುಂದಿಟ್ಟು ಅಂಗಲಾಚಿದರು.
ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬ ತಲೆಬರಹದಲ್ಲಿ ಸಿದ್ದು ಭಾವಚಿತ್ರವುಳ್ಳ ಭೋರ್ಡ್ ನೋಡಿದ ಸಿದ್ದು ಮುಗುಳ್ನಗೆ ಬೀರಿದರು. ಪ್ರತಿಕ್ರೀಯಿಸಿದ ಸಿದ್ಧರಾಮಯ್ಯ ನಿವು ನನ್ನನ್ನು ಒಮ್ಮೆ ಆಯ್ಕೆ ಮಾಡಿ ಕಳಿಸಿದ್ದಿರಿ.. ನಿಮ್ಮ ಪ್ರೀತಿ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.. ನಿಮ್ಮ ಪ್ರೀತಿಗೆ ನಾನು ಚಿರಋಣಿ..ನಾನು ಎಲ್ಲಿ ನಿಲ್ಲಬೇಕು ಎನ್ನುವುದನ್ನ ಹೈ ಕಮಾಂಡ್ ತಿರ್ಮಾನಿಸಲಿದೆ ಎಂದು ಹೇಳಿದ ಅವರು ಅಭಿಮಾನಿಗಳ ಒತ್ತಾಯಕ್ಕೆ ಮನಿದು ಇಲ್ಲಿಯೇ ನಿಲ್ಲುತ್ತೆನೆ ಎಂದು ಘೋಷಿಸಿ ಜನರನ್ನ ಸಮಾಧಾನದ ಪಡಿಸಿದರು.
ಶಾಸಕನಿರಲಿ, ಮುಖ್ಯಮಂತ್ರಿಯೇ ಇರಲಿ, ಗ್ರಾಪಂ ಅಧ್ಯಕ್ಷ ಇರಲಿ ಯಾರು ಇಲ್ಲಿ ದೇವಲೋಕದಿಂದ ಬಂದವರಲ್ಲ. ಇಲ್ಲಿರುವವರೆಲ್ಲ ಮನುಷ್ಯರೇ.. ನಿಮ್ಮಲ್ಲೇ ನಿಮ್ಮ ಪರವಾಗಿ ನಿಮ್ಮ ಕೆಲಸ ಮಾಡುವ ಪ್ರತಿನಿಧಿ. ನಿಮ್ಮ ಓಟಿನಿಂದ ಆಯ್ಕೆಯಾಗಿ ಹೋಗಿರುವ ನಾನು ಸೇರಿದಂತೆ ಎಲ್ಲರೂ ಜನಸೇವಕರೇ. ನಿಮ್ಮ ಕೆಲಸ ಮಾಡುವುದೇ ನಮ್ಮ ಕಾಯಕವಾಗಿರಬೇಕಷ್ಟೆ. ಶಾಸಕ ಸಿದ್ಧರಾಮಯ್ಯ
ಸೋಮನಕೊಪ್ಪ ನೀಲಲೋಹಿತ ಸ್ವಾಮಿಜಿ, ಶಾಸಕ ಆನಂದ ನ್ಯಾಮಗೌಡ್ರ, ಮಾಜಿ ಸಚಿವ ಎಚ್ ವೈ ಮೇಟಿ, ಸಣ್ಣಬೀರಪ್ಪ ಪೂಜಾರ, ನಾಗಪ್ಪ ಅಡಪಟ್ಟಿ, ಹೊಳಬಸು ಶೆಟ್ಟರ್, ಭೀಮಸೇನ ಚಿಮ್ಮನಕಟ್ಟಿ, ಬ್ಲಾಕ್ ಅಧ್ಯಕ್ಷ ಎಚ್ ಬಿ ಯಕ್ಕಪ್ಪನವರ, ಬಸವರಾಜ ಕಟ್ಟಿಕಾರ, ಮಹೇಶ ಹೊಸಗೌಡ್ರ, ಶಿವವ್ವ ಕರಲಿಂಗನ್ನವರ, ಬಸವರಾಜ ಬ್ಯಾಹಟ್ಟಿ, ರಾಮಣ್ಣ ಡೊಳ್ಳಿನ, ಹನಮಂತ ನರಗುಂದ, ವೆಂಕಣ್ಣ ಹೊರಕೇರಿ, ಶಿವಾನಂದ ಮಣ್ಣೂರ, ಲಕ್ಷ್ಮಣ್ ದಾದನಟ್ಟಿ, ಸಣ್ಣಬೀರಪ್ಪ ದ್ಯಾವನಗೌಡ್ರ, ಮಾರುತಿ ತಳವಾರ, ರಾಮನಗೌಡ ದ್ಯಾವನಗೌಡ್ರ, ರೇಣುಕಾ ಹಿರಗನ್ನವರ, ಲಲಿತಾ ಹುನಗುಂದ. ಬಸವ್ವ ತುರನೂರ , ಕಮಲವ್ವ ಪಾಟೀಲ, ಲಲಿತಾ ಪೂಜಾರ, ಶೇಖಪ್ಪ ಪವಾಡಿನಾಯ್ಕರ್, ದ್ಯಾವಪ್ಪ ಕರಿಗಾರ, ನೇತ್ರಾವತಿ ಹಡಪದ, ನಾಗವ್ವ ದಂಡಿನ, ಶ್ಯಾಮಲಾ ಮಾದರ ಸೇರಿದಂತೆ ಪಿಡಿಒ ಪರಸನ್ನವರ ಗ್ರಾಮಸ್ಥರು ಸಿಬ್ಬಂದಿಗಳು ಇದ್ದರು.