ಅಥಣಿ: ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಫುಲ್ ಆಕ್ಟಿವ್ ಆಗಿರುವ ಶಾಸಕ ಕುಮಟಳ್ಳಿ ಇಂದು ಬೆಳಗ್ಗೆಯಿಂದ ಅಥಣಿ ಹೆಸ್ಕಾಂ ಕಚೇರಿ ಎದುರು ರೈತರೊಂದಿಗೆ ಧರಣಿ ನಡೆಸಿದ್ದಾರೆ.
ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದ್ದು, ಇದರಿಂದಾಗಿ ರೈತರ ಬೆಳೆಗೆ ನೀರುಣಿಸಲು ಮತ್ತು ಜಾನುವಾರುಗಳ ಕುಡಿಯುವ ನೀರಿನ ಪೂರೈಕೆಗೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ರೈತರೊಂದಿಗೆ ಹೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದ್ದಾರೆ. ಈ ವೇಳೆ ಅಪ್ಪಾಸಾಹೇಬ ಅವತಾಡೆ,ಡಾ” ಅನೀಲ ಸೌದಾಗರ, ಶಶಿ ಸಾಳವೆ,ಅಶೋಕ ಎಲಡಗಿ,ಬಾಬಾಗೌಡಾ ಪಾಟೀಲ,ಮಲಪ್ಪಾ ಹಂಚ್ಚನಾಳ,ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು