ಹುಬ್ಬಳ್ಳಿ: ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡು ನಾಲ್ಕು ವರ್ಷದ ಮಗು ಸೇರಿ ನಾಲ್ವರು ಗಾಯಗೊಂಡ ಘಟನೆ ನಗರದ ವೀರಾಪುರ ಓಣಿಯ ಕರಿಯಮ್ಮದೇವಿ ದೇವಸ್ಥಾನದಲ್ಲಿ ಮಧ್ಯಾಹ್ನ ಸಂಭವಿಸಿದೆ
ಐಶ್ವರ್ಯ ಬಿಜವಾಡ,ಸರಸ್ವತಿ ಯಮನೂರು, ಪ್ರಕಾಶ ಹಿರೇಮಠ ಹಾಗೂ ನಾಲ್ಕು ವರ್ಷದ ನಮಿತಾ ಬಿಜವಾಡ ಎಂಬುವವರು ಗಾಯಗೊಂಡಿದ್ದಾರೆ.
ಕರಿಯಮ್ಮದೇವಿ ದೇವಸ್ಥಾನದಲ್ಲಿ ಅಯ್ಯಪ್ಪ ಭಕ್ತರು ಸನ್ನಿಧಾನ ಮಾಡಿದ್ದು, ಅಲ್ಲಿ ಪೂಜೆ, ಅಡುಗೆ ಮಾಡುತ್ತಿದ್ದರು. ಹೀಗಾಗಿ ಸಿಲಿಂಡರ್ ಇತ್ರು. ಅಡುಗೆ ಅನಿಲ ಸೋರಿಕೆ ಯಾಗಿದ್ದು ಗೊತ್ತಾಗಿರಲಿಲ್ಲ ಎನ್ನಲಾಗಿದೆ. ಪೂಜಾರಿ ಪ್ರಕಾಶ ಹಿರೇಮಠ ದೇವಸ್ಥಾನದಲ್ಲಿ ಊದಬತ್ತಿ ಹಚ್ಚಲು ದೀಪದ ಕಡ್ಡಿ ಗೀರಿದಾಗ ಸಿಲಿಂಡರ್ ಸ್ಪೋಟಗೊಂಡಿದೆ ಎಂದು ಹೇಳಲಾಗಿದೆ. ಗಾಯಗೊಂಡ ನಾಲ್ವರೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಡಿಗೇರಿ ಠಾಣೆ ಪೊಲೀಸರು ಸ್ಥಳ ಭೇಟಿ ನೀಡಿ ಗಾಯಾಳುಗಳನ್ನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಶೇ 30 ರಷ್ಟು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.