ವಿಜಯಪುರ (ಮುದ್ದೇಬಿಹಾಳ) : ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಅಡವಿ ಹುಲಗಬಾಳ ಹಾಗೂ ಹುಳಗಬಾಳ ತಾಂಡಾ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಕೊಂಡು ಹೋಗಿದೆ. ಸೇತುವೆಯ ಅಕ್ಕ-ಪಕ್ಕದ ರಸ್ತೆ ಕಿತ್ತು ಹೋಗಿದ್ದು ಸಂಪರ್ಕ ಕಡಿತವಾಗಿದೆ.
ತಾಂಡಾ ಶಾಲಾ ಮಕ್ಕಳು ಹುಲಗಬಾಳ ಗ್ರಾಮದಲ್ಲಿ ಸಿಲುಕಿಕೊಂಡಿದ್ದರೆ, ಅತ್ತ ಕಡೆ ಹುಳಗಬಾಳ ಗ್ರಾಮಸ್ಥರು ಜಮೀನುಗಳಿಗೆ ತೇರುಳಿದ್ದು ತಾಂಡಾದಲ್ಲಿ ಸಿಲುಕಿಕೊಂಡು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.