ಕೊಪ್ಪಳ: ತಾಲೂಕಿನ ಕುಣಿಕೇರಿ ತಾಂಡಾದ ಗಿರೀಶ ಕುರಿ(38) ಎಂಬ ಯುವಕ ಅಂಗಾಂಗ ದಾನ ಮಾಡುವುದರೊಂದಿಗೆ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ತಾಲ್ಲೂಕಿನ ಕುಣಿಕೇರಿ ತಾಂಡಾದ ಬಳಿ ಗಂಗಾವತಿಯಿಂದ ಬರುತ್ತಿದ್ದ ವೇಳೆ ಬೈಕಗಳ ನಡುವೆ ಡಿಕ್ಕಿಯಾಗಿ ಸೆ.18( ಭಾನುವಾರ) ಅಪಘಾತ ಸಂಭವಿಸಿದ್ದು, ಇದರಲ್ಲಿ ಗಿರೀಶ ಮೃತಪಟ್ಟಿದ್ದಾನೆ. ಇದರಲ್ಲಿ ತಲೆಗೆ ಪೆಟ್ಟು ಬಿದ್ದಿದ್ದು, ೧೪ ವಯಸ್ಸಿನ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ, ಶುಕ್ರವಾರ ಗಿರೀಶ ಸಾವಿಗೀಡಾಗಿದ್ದಾನೆ. ಜನರಿಗೆ ತನ್ನ ಹೃದಯ, ಎರಡು ಕಣ್ಣು, ಕರಳು ಹಾಗೂ ಕಿಡ್ನಿಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.