ʻಹಿಂದುತ್ವದ ಬಗ್ಗೆ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲʼ

yatnal
Advertisement

ಬೆಳಗಾವಿ(ಗೋಕಾಕ): ಹಿಂದೂಗಳ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ್ದಿಯಾ, ನಮ್ಮದು ದೊಡ್ಡ ಮನಸ್ಸು. ಕ್ಷಮೆ ಕೂಡ ಮಾಡಿದ್ದೇವೆ, ಒಂದು ವೇಳೆ ಇದೇ ರೀತಿ ಮತ್ತೇ ಹಿಂದುತ್ವದ ಬಗ್ಗೆ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ನೇರವಾಗಿ ಸತೀಶ ಜಾರಕಿಹೊಳಿ ಮೇಲೆ ವಾಗ್ದಾಳಿ ನಡೆಸಿದರು.
ಗೋಕಾಕದಲ್ಲಿಂದು ಆಯೋಜಿಸಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಬೇಡಿಕೆಗೆ ಆಗ್ರಹಿಸಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇಕಾಗಿದ್ದರೆ ಗೋಕಾಕ ಚೌಕಗೆ ಒಬ್ಬನೆ ಬಂದು ನಿಲ್ಲುತ್ತೇನೆ, ನೀವು ಏನ್ ಮಾಡುತ್ತಿರಾ ನೋಡೆ ಬಿಡುವೆ ಎಂದು ನೇರವಾಗಿ ಸತೀಶ ಜಾರಕಿಹೊಳಿಗೆ ಸವಾಲು ಹಾಕಿದರು.
ವಿಧಾನಸಭೆಯಲ್ಲಿ ನಾನು ದಲಿತ, ಹಿಂದುಳಿದವರು ಸೇರಿದಂತೆ ಎಲ್ಲ ಸಮಾಜದ ಪರವಾಗಿ ಮಾತನಾಡಿದ್ದೇನೆ. ನೀನು ಎಲ್ಲಿ ಮಾತಾಡಿದ್ದಿಯಪ್ಪ ಎಂದು ಪ್ರಶ್ನಿಸಿದ ಅವರು, ತಾಕತ್ತಿದ್ದರೆ ನೀನು ನನ್ನ ವಿರುದ್ಧ ಮಾತನಾಡಬೇಕಿತ್ತು. ಪಾಪ ಬೇರೆ ದಲಿತರನ್ನು ಬಳಸಿಕೊಂಡು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಿಯಾ ಎಂದು ಆರೋಪಿಸಿದರು.