ಗದಗ: ಸಾರಿಗೆ ಸಂಸ್ಥೆಯ ಗದಗ ವಿಭಾಗದಡಿ ಸಂಚರಿಸುವ ಬಸ್ಸುಗಳಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಟಿಕೆಟ್ ನೀಡಿದ ಘಟನೆಗೆ ಸಂಬಂಧಿಸಿದಂತೆ ಟಿಕೆಟ್ ರೋಲ್‌ಗಳನ್ನು ಪೂರೈಸಿದ ವಿಶಾಖಪಟ್ಟಣ ಮೂಲದ ಕಂಪನಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಸಾರಿಗೆ ಸಂಸ್ಥೆಗೆ ವಿಶಾಖಪಟ್ಟಣದ ಮೆ.ವೆಬ್ ಪ್ರೋಸ್ ಸೊಲ್ಯೂಷನ್ ಪ್ರೆವೈಟ್ ಲಿಮಿಟೆಡ್ ಕಂಪನಿ ಟಿಕೆಟ್ ರೋಲ್‌ಗಳನ್ನು ಸರಬರಾಜು ಮಾಡುವ ಗುತ್ತಿಗೆ ಪಡೆದಿದೆ. ಈ ಸಂಸ್ಥೆ ಸರಬರಾಜು ಮಾಡಿದ ಎರಡು ಬಾಕ್ಸಗಳು ಮಹಾರಾಷ್ಟ್ರ, ಸಾರಿಗೆ ಸಂಸ್ಥೆಗೆ ಕಳುಹಿಸುವ ಬದಲು ಗದಗ ವಿಭಾಗಕ್ಕೆ ಸರಬರಾಜಾಗಿವೆ. ರೋಣ ಘಟಕದಲ್ಲಿ 70 ರೋಲ್‌ಗಳು ಹಾಗೂ ಗದಗ ಘಟಕದಲ್ಲಿ 60 ರೋಲ್‌ಗಳನ್ನು ವಿತರಣೆ ಮಾಡಲಾಗಿತ್ತು.