ʻಟಿಪ್ಪು ಎಕ್ಸಪ್ರೆಸ್’ ಹೆಸರು ಕೈ ಬಿಟ್ಟ ರೇಲ್ವೆ ಸಚಿವಾಲಯ

ಟಿಪ್ಪು ಎಕ್ಸಪ್ರೆಸ್' ಹೆಸರು ಕೈ ಬಿಟ್ಟ
Advertisement

ಹುಬ್ಬಳ್ಳಿ: ರಾಜ್ಯದಲ್ಲಿ ಸಂಚರಿಸುವ ಎರಡು ಪ್ರಮುಖ ರೈಲುಗಳ ಹೆಸರು ಬದಲಾವಣೆ ಮಾಡಿ ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.
ಮೈಸೂರು -ಬೆಂಗಳೂರು ನಡುವೆ ಸಂಚರಿಸುವ ʻಟಿಪ್ಪು ಎಕ್ಸಪ್ರೆಸ್’ (ಟ್ರೇನ್ ನಂಬರ್-12613/ 12614) ಹೆಸರು ಬದಲಾಯಿಸಿ ʻಒಡೆಯರ್ ಎಕ್ಸಪ್ರೆಸ್ʼ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಅದೇ ರೀತಿ ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ರೈಲಿಗೆ ʻಕುವೆಂಪು ಎಕ್ಸಪ್ರೆಸ್ʼ ಎಂದು ಹೆಸರಿಡಲಾಗಿದೆ.
ರಾಜ್ಯದಲ್ಲಿ ಸಂಚರಿಸುವ ಎರಡು ರೈಲುಗಳ ಹೆಸರು ಬದಲು…
ಈ ಮೊದಲು ಟಿಪ್ಪು ಹೆಸರು ಬದಲಾಯಿಸಲು ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು. ರೈಲ್ವೆ ಸಚಿವಾಲಯಕ್ಕೆ ಮನವಿ ಸಹ ಸಲ್ಲಿಕೆಯಾಗಿದ್ದವು. ಈ ಎಲ್ಲ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ಟಿಪ್ಪು ಎಕ್ಸಪ್ರೆಸ್ ಹೆಸರು ಬದಲಾಯಿಸಿದೆ.