ʻಜೋಡೋʼದಲ್ಲಿ ಕಮಲ್‌ ಕಮಾಲ್

Advertisement

ನವದೆಹಲಿ: ದೆಹಲಿಯಲ್ಲಿ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಲ್ಲಿ ನಟ ಮತ್ತು ಜನತಾ ನ್ಯಾಯ ಕೇಂದ್ರದ ನಾಯಕ ಕಮಲ್ ಹಾಸನ್ ಭಾಗವಹಿಸಿದ್ದರು.
108ನೇ ದಿನಕ್ಕೆ ರಾಹುಲ್ ಗಾಂಧಿ ರಾಜಧಾನಿ ದೆಹಲಿಯಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿಯವರ ಈ ಪಾದಯಾತ್ರೆಯಲ್ಲಿ ಜನತಾ ನ್ಯಾಯ ಕೇಂದ್ರದ ಸ್ವಯಂಸೇವಕರು ಕೂಡ ಪಾಲ್ಗೊಂಡಿದ್ದಾರೆ. ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಮಲ್ ಹಾಸನ್, ‘ನನ್ನ ರಾಜಕೀಯ ಪಯಣ ಶುರುವಾಗಿದ್ದು ನನಗಾಗಿ ಅಲ್ಲ, ಜನರಿಗಾಗಿ’ ಹಾಗೂ ‘ನಾವಿಬ್ಬರು ಮರಿಮೊಮ್ಮಕ್ಕಳೊಂದಿಗೆ ಒಟ್ಟಿಗೆ ನಡೆಯುತ್ತಿದ್ದೇವೆ’ ಎಂದು ಭಾವುಕರಾಗಿ ಭಾಷಣ ಮಾಡಿದರು.