ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣಗಳು ನಿರ್ಮಾಣವಾಗಿದ್ದು, ಇವುಗಳನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾನೇ ಜೆಸಿಬಿ ತಂದು ಒಡೆದು ಹಾಕುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದ ಮಾತು ಈಗ ವೈರಲ್ ಆಗಿದೆ.
ಭಾನುವಾರ ಕಾರ್ಯಕ್ರಮದಲ್ಲಿವೊಂದರಲ್ಲಿ ಮಾತನಾಡಿದ್ದ ಅವರು, ನಾನು ಸಾಮಾಜಿಕ ಜಾಲತಾಣಗಳನ್ನು ನೋಡಿದೆ. ಅಲ್ಲಿ ಯಾವುದೋ ಬಸ್ ನಿಲ್ದಾಣ ಗುಂಬಜ್ ಆಕಾರದಲ್ಲಿ ರಚನೆಯಿದ್ದು, ನಡುವೆ ದೊಡ್ಡ ಗುಂಬಜ್ ಅಕ್ಕಪಕ್ಕ ಎರಡು ಸಣ್ಣ ಗುಂಬಜ್ ಇವೆ. ಈ ರೀತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೂರು ದಿನಗಳಲ್ಲಿ ಅವುಗಳು ತೆರವು ಆಗದಿದ್ದರೆ ನಾನೇ ಜೆಸಿಬಿ ಮೂಲಕ ಅವುಗಳನ್ನು ಒಡೆದು ಹಾಕುತ್ತೇನೆ ಎಂದಿದ್ದರು.
ಮೈಸೂರಿಗೆ ಮಹಾರಾಜರು ಅಡಿಪಾಯ ಹಾಕಿಕೊಟ್ಟಿದ್ದು ಇಲ್ಲಿ ಎಲ್ಲ ಸಂಕೇತಗಳು ಕೂಡ ಚಾಮುಂಡಿ ತಾಯಿಯ ಭಕ್ತಿ ಸೂಚಕವಾಗಿರಬೇಕು ಎಂದಿದ್ದರು. ಸದ್ಯ ಅವರ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ.
Home ನಮ್ಮ ಜಿಲ್ಲೆ ʻಗುಂಬಜ್ ಮಾದರಿ ಬಸ್ ನಿಲ್ದಾಣ ತೆರವುಗೊಳಿಸಿ, ಇಲ್ಲದಿದ್ದರೆ ನಾನೇ ಜೆಸಿಬಿ ತಂದು ಒಡೆದು ಹಾಕುತ್ತೇನೆʼ