ಬಿಜೆಪಿಯವರ “ದಲಿತರ ಮನೆ ಊಟ” ಎಂಬ ಕಾರ್ಯಕ್ರಮ ದಲಿತರು ಇನ್ನೂ ಅಸ್ಪೃಶ್ಯರು ಎಂದು ತೋರಿಸುವುದೇ ಆಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ದಲಿತರ ಮನೆಗೆ ಹೋದ ಬಿಜೆಪಿ ನಾಯಕರು ಅಸ್ಪೃಶ್ಯತೆ ಆಚರಿಸಿ ಬಂದಿದ್ದಾರೆ. ದಲಿತರ ಮನೆಯ ಊಟ ಅಷ್ಟೇ ಅಲ್ಲ, ಅವರ ಮನೆಯ ತಟ್ಟೆ, ಲೋಟಗಳನ್ನೂ ಅಶುದ್ಧ, ಮೈಲಿಗೆ ಎಂದು ಭಾವಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಕಿಡಿಕಾರಿದೆ.